ನಗು ಎಂದಿದೆ ಮಂಜಿನ ಬಿಂದು
ನಲಿ ಎಂದಿದೆ ಗಾಳಿ ಇಂದು
ನಗು ಎಂದಿದೆ ಮಂಜಿನ ಬಿಂದು
ಚಿಲಿಪಿಲಿ ಎಂದು ಹಕ್ಕಿಯು ಹೇಳಿದೆ ಈಗ.. ಬಾ ಬಾ
ಜೊತೆಯಲಿ ಕೋಡಿ ನಮ್ಮಂತೆ ಹಾರು ನೀ ಬೇಗ.. ಬಾ ಬಾ
ಹಾರಲು ಆಗದೆ ಸೋತಿರಲು
ಬಾಳಿಗೆ ಗೆಳೆಯನು ಬೇಕಿರಲು
ಬಯಸಿದೆ ಅರಸಿದೆ ನಾ
ಕಂಡೆ ಈಗಲೇ ನಾ.. ನನ್ನ ಸ್ನೇಹಿತನ..
ಇದೆ ನಗುವ ಮನದ ಸ್ಪಂದ
ಸವಿ ಮಧುರ ಮಮತೆ ಬಂಧ
ಆ.. ಆ..
ತನನನನ ತನನಾನ
ತನನನನನನನನಾನ
ಆ..
ಹಾಡುವ ಬಾ ಬಾ ನದಿ ಅಲೆ ಕೊಡುವುದು ಜಾಗ ಈಗ
ಕುಣಿಯುವ ಬಾ ಬಾ ಮಳೆ ಹನಿ ತರುವುದು ತಾಳ ಮೇಳ
ಪ್ರಕೃತಿಯು ನರೆದ ಕವನವಿದು
ಮಮತೆಯ ಸೊಗಸಿನ ಪಲ್ಲವಿಯು
ಸುಂದರ ಸ್ನೇಹವಿದು
ಇಂಥ ಅನುಬಂಧ ಎಂಥ ಆನಂದ
ಇದೆ ನಗುವ ಮನದ ಸ್ಪಂದ
ಸವಿ ಮಧುರ ಮಮತೆ ಬಂಧ
No comments:
Post a Comment