ನಿನಗಾಗಿಯೇ, ನಿನಗಾಗಿಯೇ,
ಕರೆಯೋಲೆಯ ಬರೆದಾಗಿದೆ.
ನಿನಗಾಗಿಯೇ, ನಿನಗಾಗಿಯೇ,
ಕಿರುನೋಟವು ಸರಿದಾಡಿದೆ.
ಕರೆಯೋಲೆಯ ಬರೆದಾಗಿದೆ.
ನಿನಗಾಗಿಯೇ, ನಿನಗಾಗಿಯೇ,
ಕಿರುನೋಟವು ಸರಿದಾಡಿದೆ.
ಮರುಳಾಗಿ ನಾನು, ಮರೆಮಾಚುತಿರಲು,
ತೆರೆಯನ್ನು ತೆರೆದು ಬರಲಾರೆಯೇನು.
ಬೆಳಕಲ್ಲಿ ಜೀವ ನಸುನಾಚುತಿರಲು,
ಬೆಳದಿಂಗಳನ್ನು ತರಲಾರೆಯೇನು.
ತೆರೆಯನ್ನು ತೆರೆದು ಬರಲಾರೆಯೇನು.
ಬೆಳಕಲ್ಲಿ ಜೀವ ನಸುನಾಚುತಿರಲು,
ಬೆಳದಿಂಗಳನ್ನು ತರಲಾರೆಯೇನು.
ನಿನಗಾಗಿಯೇ, ನಿನಗಾಗಿಯೇ,
ಕರೆಯೋಲೆಯ ಬರೆದಾಗಿದೆ.
ನಿನಗಾಗಿಯೇ, ನಿನಗಾಗಿಯೇ,
ಕಿರುನೋಟವು ಸರಿದಾಡಿದೆ.
ಕರೆಯೋಲೆಯ ಬರೆದಾಗಿದೆ.
ನಿನಗಾಗಿಯೇ, ನಿನಗಾಗಿಯೇ,
ಕಿರುನೋಟವು ಸರಿದಾಡಿದೆ.
ಅಲೆಯುವ ಕಣ್ಣಿನ ಕಾಡಿಗೆ ಕರಗಲು,
ತಲ ತಲ ನಗುತಿದೆ ಈ ಹೂವ ಮಾಲೆ.
ಕನಸಿನ ಕಲರವ ಸುತ್ತಲೂ ಕವಿದಿದೆ,
ನನ್ನನು ಹುಡುಕುತ ನೀ ಬಂದಮೇಲೆ.
ತಲ ತಲ ನಗುತಿದೆ ಈ ಹೂವ ಮಾಲೆ.
ಕನಸಿನ ಕಲರವ ಸುತ್ತಲೂ ಕವಿದಿದೆ,
ನನ್ನನು ಹುಡುಕುತ ನೀ ಬಂದಮೇಲೆ.
ಇರುಳಲ್ಲಿ ಬರೆದ ಮದರಂಗಿಯಲ್ಲಿ,
ರಂಗೇರುವಂತೆ ನೆನಪಾಗು ನೀನು.
ನನಗಾಗಿ ನಿನ್ನಾ ಪರದಾಟ ಚಂದ,
ತುಸು ದೂರದಲ್ಲಿ ಇರಲಾರೆಯೇನು?
ನನಗಾಗಿ ನಿನ್ನಾ ಪರದಾಟ ಚಂದ,
ತುಸು ದೂರದಲ್ಲಿ ಇರಲಾರೆಯೇನು?
ರಂಗೇರುವಂತೆ ನೆನಪಾಗು ನೀನು.
ನನಗಾಗಿ ನಿನ್ನಾ ಪರದಾಟ ಚಂದ,
ತುಸು ದೂರದಲ್ಲಿ ಇರಲಾರೆಯೇನು?
ನನಗಾಗಿ ನಿನ್ನಾ ಪರದಾಟ ಚಂದ,
ತುಸು ದೂರದಲ್ಲಿ ಇರಲಾರೆಯೇನು?
ನಿನಗಾಗಿಯೇ, ನಿನಗಾಗಿಯೇ,
ಕರೆಯೋಲೆಯ ಬರೆದಾಗಿದೆ.
ನಿನಗಾಗಿಯೇ, ನಿನಗಾಗಿಯೇ,
ಕಿರುನೋಟವು ಸರಿದಾಡಿದೆ.
ಕರೆಯೋಲೆಯ ಬರೆದಾಗಿದೆ.
ನಿನಗಾಗಿಯೇ, ನಿನಗಾಗಿಯೇ,
ಕಿರುನೋಟವು ಸರಿದಾಡಿದೆ.
ಹೃದಯದ ಕನ್ನಡಿ ಒಲವಲಿ ಮಿನುಗಲು,
ಅದರಲಿ ನಿನ್ನದೇ ಮೊಗವನ್ನು ನೋಡು.
ನೆನಪಿನ ಪರಿಮಳ ಮೆಲ್ಲಗೆ ಸುಳಿಯುತ,
ಕಾಡದೆ ಸೆಳೆದಿದೆ ಹಿತವಾದ ಹಾಡು.
ಸೆರಗಲ್ಲಿ ಬೆರೆತ ಚಿತ್ತಾರದಲ್ಲಿ,
ನವಿರಾದ ಸುಳಿಯ ಜರಿಯಾಗು ನೀನು.
ಹಾಗೆಲ್ಲ ಈಗ ಮಾತಾಡಲಾರೆ,
ಏಕಾಂತದಲ್ಲಿ ಸಿಗಲಾರೆಯೇನು?
ಹಾಗೆಲ್ಲ ಈಗ ಮಾತಾಡಲಾರೆ,
ಏಕಾಂತದಲ್ಲಿ ಸಿಗಲಾರೆಯೇನು?
ಅದರಲಿ ನಿನ್ನದೇ ಮೊಗವನ್ನು ನೋಡು.
ನೆನಪಿನ ಪರಿಮಳ ಮೆಲ್ಲಗೆ ಸುಳಿಯುತ,
ಕಾಡದೆ ಸೆಳೆದಿದೆ ಹಿತವಾದ ಹಾಡು.
ಸೆರಗಲ್ಲಿ ಬೆರೆತ ಚಿತ್ತಾರದಲ್ಲಿ,
ನವಿರಾದ ಸುಳಿಯ ಜರಿಯಾಗು ನೀನು.
ಹಾಗೆಲ್ಲ ಈಗ ಮಾತಾಡಲಾರೆ,
ಏಕಾಂತದಲ್ಲಿ ಸಿಗಲಾರೆಯೇನು?
ಹಾಗೆಲ್ಲ ಈಗ ಮಾತಾಡಲಾರೆ,
ಏಕಾಂತದಲ್ಲಿ ಸಿಗಲಾರೆಯೇನು?
ನಿನಗಾಗಿಯೇ, ನಿನಗಾಗಿಯೇ,
ಕರೆಯೋಲೆಯ ಬರೆದಾಗಿದೆ.
ನಿನಗಾಗಿಯೇ, ನಿನಗಾಗಿಯೇ,
ಕಿರುನೋಟವು ಸರಿದಾಡಿದೆ.
ಕರೆಯೋಲೆಯ ಬರೆದಾಗಿದೆ.
ನಿನಗಾಗಿಯೇ, ನಿನಗಾಗಿಯೇ,
ಕಿರುನೋಟವು ಸರಿದಾಡಿದೆ.
No comments:
Post a Comment