ಬೀಸೋ ಗಾಳಿ ಜೊತೆ ಬೀದಿ ದೀಪಗಳು
ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು
ಮಾತನಾಡುತಿರುವಾಗ
ಏಕಾಂಗಿ... ನಾನು ಏಕಾಂಗಿ
ಎಲ್ಲೋ ಆಚೆಗೆ ಮರೆಯಾಗಿ
ಏನೋ ಕಾದಿದೆ ನನಗಾಗಿ
Chorus:
ಗೋವಿಂದ ಗೋವಿಂದ ಹರೇ
ಗೋಪಾಲ ಗೋಪಾಲ ಹರೇ
ಗೋವಿಂದ ಗೋವಿಂದ ಹರೇ ಗೋಪಾಲ..
ಎಷ್ಟೊಂದು ಪಾತ್ರ ನೀಡುವ..
ಬದುಕೊಂದು ಧಾರವಾಹಿಯೇ..
ಈ ನಾಲ್ಕು ಗೋಡೆ ಆಚೆಗೆ
ನಿಜವಾದ ಪಾಠಶಾಲೆಯೇ
ಎಲ್ಲ ಹಿಂದೆಯೇ ಮರೆಯಾಗಿ
ಹೂವು ಕಾದಿದೆ ನನಗಾಗಿ
ಬೀಸೋ ಗಾಳಿ ಜೊತೆ ಬೀದಿ ದೀಪಗಳು
ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು
ಮಾತನಾಡುತಿರುವಾಗ
ಏಕಾಂಗಿ... ನಾನು ಏಕಾಂಗಿ
ಎಲ್ಲೋ ಆಚೆಗೆ ಮರೆಯಾಗಿ
ಏನೋ ಕಾದಿದೆ ನನಗಾಗಿ