SHOP HERE

Welcome To Always Lucky

View life as a continuous learning experience.

Tuesday, March 20, 2012

Ugadi Special Item (ನಿಂಬೆಸಾರು.)

Ugadi Special Item (ನಿಂಬೆಸಾರು.)

ಬೇಕಾಗುವ ಸಾಮಾಗ್ರಿಗಳು:
* 1/2 ಕಪ್ ಸಾರು ಬೇಳೆ
* 2 ಹಸಿಮೆಣಸು
* ಒಂದು ಬೆಳ್ಳುಳ್ಳಿ
* 1/2 ಇಂಚಿನ ಶುಂಠಿ
* ಕೊತ್ತಂಬರಿ ಸೊಪ್ಪು
* ಸ್ವಲ್ಪ ಕರಿಬೇವಿನ ಎಲೆ
* 1/2 ದೊಡ್ಡ ನಿಂಬೆಹಣ್ಣು
* 8-10 ಕರಿಮೆಣಸು ಬೀಜ
* 1/4 ಚಮಚ ಅರಿಶಿಣ
* 1/2 ಚಮಚ ಸಾಸಿವೆ
* 1/2 ಚಮಚ ಜೀರಿಗೆ
* 2-3 ಚಮಚ ಎಣ್ಣೆ ಅಥವಾ ತುಪ್ಪ
* ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

1. ಬೇಳೆಯನ್ನು ಚೆನ್ನಾಗಿ ತೊಳೆದು ಸ್ವಲ್ಪ ಅರಿಶಿಣ ಹಾಕಿ 2-3 ಕಪ್ ನೀರು ಹಾಕಿ ಪ್ರೆಶರ್ ಕುಕ್ಕರ್ ನಲ್ಲಿ 3 ವಿಶಲ್ ಬರುವವರೆಗೆ ಬೇಯಿಸಬೇಕು.

2. ಈಗ ಬೆಂದ ಬೇಳೆಯನ್ನು ಸೌಟ್ ನಿಂದ ಜಜ್ಜಿ, ಒಂದು ಕಪ್ ನೀರು ಸೇರಿಸಿ 5-10 ನಿಮಿಷ ಹಾಗೇ ಬಿಡಬೇಕು.

3. ಈಗ ಸಾರಿನ ಪಾತ್ರೆಯನ್ನು ಉರಿಯಲ್ಲಿಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಬೇಕು. ಎಣ್ಣೆ ಬಿಸಿಯಾದಾಗ ಅದಕ್ಕೆ ಸಾಸಿವೆಯನ್ನು ಹಾಕಬೇಕು.

4. ಸಾಸಿವೆ ಚಟಾಪಟಾ ಶಬ್ದ ಬಂದ ನಂತರ ಜೀರಿಗೆ, ಜಜ್ಜಿದ ಬೆಳ್ಳುಳ್ಳಿ, ಚಿಕ್ಕದಾಗಿ ಕತ್ತರಿಸಿದ ಶುಂಠಿ, ಹಸಿಮೆಣಸಿನ ಕಾಯಿ, ಕರಿಬೇವಿನ ಎಲೆ, ಪುಡಿಮಾಡಿದ ಕರಿಮೆಣಸು ಮತ್ತು ಹಸಿಮೆಣಸಿನ ಕಾಯಿ ಹಾಕಬೇಕು. ಬೆಳ್ಳುಳ್ಳಿ ಕಂದು ಬಣ್ಣಕ್ಕೆ ತಿರುಗುವಾಗ ಸ್ವಲ್ಪ ಅರಿಶಿಣವನ್ನು ಸೇರಿಸಬೇಕು. ಅರಿಶಿಣ ಕರಿಯಲು ಬಿಡಬಾರದು.

5. 
ಈಗ ಬೇಯಿಸಿದ ಬೇಳೆಯನ್ನು ಈ ಮಿಶ್ರಣಕ್ಕೆ ಮೆಲ್ಲನೆ ಸುರಿಯಬೇಕು. ನಂತರ ಬೇಯಿಸಬೇಕು. ರಸ ಪಾತ್ರೆಯಿಂದ ಉಕ್ಕಿ ಹೊರಚೆಲ್ಲದಂತೆ ನೋಡಿಕೊಳ್ಳಬೇಕು. ಈಗ ರುಚಿಗೆ ತಕ್ಕ ಉಪ್ಪು ಹಾಕಿ ರಸವನ್ನು ಚೆನ್ನಾಗಿ ಕುದಿಸಬೇಕು. ಈಗ ಸಾರಿಗೆ ನಿಂಬೆರಸ ಹಿಂಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ನಿಂಬೆ ಸಾರು ರೆಡಿ. 

No comments:

Post a Comment