ನೀ ಸನಿಹಕೆ ಬಂದರೆ ಹೃದಯದ ಗತಿ ಏನು?
ಹೇಳು ನೀನು, ನೀನೆ ಹೇಳು.
ಇನ್ನೂ ನಿನ್ನ, ಕನಸಿನಲ್ಲಿ ಕರೆ ನೀನು ಶುರು ನಾನು.
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ,
ಏನು? ಹೇಳು, ಹೇಳು ನೀನು.
ಹೇಳು ನೀನು, ನೀನೆ ಹೇಳು.
ಇನ್ನೂ ನಿನ್ನ, ಕನಸಿನಲ್ಲಿ ಕರೆ ನೀನು ಶುರು ನಾನು.
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ,
ಏನು? ಹೇಳು, ಹೇಳು ನೀನು.
ಸಮೀಪ ಬಂತು ಬಯಕೆಗಳ, ವಿಶೇಷವಾದ ಮೆರವಣಿಗೆ.
ಇದೀಗ ನೋಡು ಬೆರಳುಗಳ, ಸರಾಗವಾದ ಬರವಣಿಗೆ.
ನಿನ್ನಾ ಬಿಟ್ಟು ಇಲ್ಲಾ ಜೀವ, ಎಂದೂ ಕೂಡ ಒಂದು ಗಳಿಗೆ.
ಇದೀಗ ನೋಡು ಬೆರಳುಗಳ, ಸರಾಗವಾದ ಬರವಣಿಗೆ.
ನಿನ್ನಾ ಬಿಟ್ಟು ಇಲ್ಲಾ ಜೀವ, ಎಂದೂ ಕೂಡ ಒಂದು ಗಳಿಗೆ.
ನಿನ್ನಾ ಮಾತು ಏನೇ ಇರಲಿ, ನಿನ್ನಾ ಮೌನ ನಂದೇ ಏನು?
ನೀ ಸನಿಹಕೆ ಬಂದರೆ ಹೃದಯದ ಗತಿ ಏನು?
ಹೇಳು ನೀನು. ನೀನೆ ಹೇಳು.
ನೀ ಸನಿಹಕೆ ಬಂದರೆ ಹೃದಯದ ಗತಿ ಏನು?
ಹೇಳು ನೀನು. ನೀನೆ ಹೇಳು.
ನನ್ನಾ ಎದೆಯ, ಸಣ್ಣಾ ತೆರೆಯ, ಧಾರಾವಾಹಿ ನಿನ್ನಾ ನೆನಪು.
ನೆನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು.
ಉಸಿರು ಹಾರಿ ಹೋಗುವಹಾಗೆ,
ಬಿಗಿದು ತಬ್ಬಿಕೊಳ್ಳೋ ನೀನು.
ಮತ್ತೆ ಮತ್ತೆ ನಿನ್ನುಸಿರು ನೀಡುತಾ ಉಳಿಸು ನನ್ನನು.
ದಾರಿಯಲ್ಲಿ, ಬುತ್ತಿ ಹಿಡಿದು
ನಿಂತ ಸಾಥಿ ನೀನೆ ಏನು?
ನೆನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು.
ಉಸಿರು ಹಾರಿ ಹೋಗುವಹಾಗೆ,
ಬಿಗಿದು ತಬ್ಬಿಕೊಳ್ಳೋ ನೀನು.
ಮತ್ತೆ ಮತ್ತೆ ನಿನ್ನುಸಿರು ನೀಡುತಾ ಉಳಿಸು ನನ್ನನು.
ದಾರಿಯಲ್ಲಿ, ಬುತ್ತಿ ಹಿಡಿದು
ನಿಂತ ಸಾಥಿ ನೀನೆ ಏನು?
ನೀ ಸನಿಹಕೆ ಬಂದರೆ ಹೃದಯದ ಗತಿ ಏನು?
ಹೇಳು ನೀನು. ನೀನೆ ಹೇಳು.
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ,
ಏನು? ಹೇಳು, ಹೇಳು ನೀನು.
ಹೇಳು ನೀನು. ನೀನೆ ಹೇಳು.
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ,
ಏನು? ಹೇಳು, ಹೇಳು ನೀನು.
No comments:
Post a Comment