ಢವ ಢವ ನಡುಕವ
ಬಿಡು ನೀ ನಲ್ಲೆ
ಇರುವೆ ಇಲ್ಲೇ
ಏಕೆ ಅಂಜಿಕೆ ..
ಢವ ಢವ ನಡುಕವ ..
ರೋಜಾ ಹೂವಿನಂತ
ತುಟಿ ಇಂದು ಬೆದರಿ ಒಣಗಿದೆ
ನಾಚಿ ಅದರ ಕೆನ್ನೆ
ಏಕೆ ಇಂದು ಬಾಡಿ ಹೋಗಿದೆ
ಕಣ್ಣಿನ ಹನಿಗಳ
ಮಣ್ಣಿಗೆ ಚೆಲ್ಲದೆ
ಬಾರೆ ನೀ ಬಾಚಿಕೊ
ಹೆದರಿಕೆ ಏತಕೆ?
ಉಹು ಹೆದರಬೇಡ
ಎಂದು ನಾವು ಬೇರೆಯಾಗೆವು
ಊಹು ಭಯವು ಬೇಡ
ನಿನ್ನ ಬಿಟ್ಟು ದೂರ ಹೋಗೆನು
ನಿನಗೆ ನಾ ಬೇಲಿಯು
ಹಾಡುವೆ ಲಾಲಿಯು
ಹಾಯಾಗಿ ಮಲಗಿಕೊ
ಢವ ಢವ ನಡುಕವ
ಬಿಡು ನೀ ನಲ್ಲೆ
ಇರುವೆ ಇಲ್ಲೇ
ಏಕೆ ಅಂಜಿಕೆ ..
ಮಲಗಿಕೊ ಮಲಗಿಕೊ
hmmm... hmmm...
ಆಹಾಹಹ... ಆಹಾಹಹ...
ಲಲಲಲ.. hmmm...
No comments:
Post a Comment