ಲ ಲ ಲ ಲ ...
hmmm ... ಆಹಾ .. ಲ ಲ ..
ನಗುವ ನಯನ ಮಧುರ ಮೌನ
ಮಿಡಿವಾ ಹೃದಯ ಇರೆ ಮಾತೇಕೆ
ಹೊಸ ಭಾಷೆಯಿದು, ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ
ನಗುವ ನಯನ, ಮಧುರ ಮೌನ
ಮಿಡಿವಾ ಹೃದಯ ಇರೆ ಮಾತೇಕೆ
ನಿಂಗಾಗಿ ಹೇಳುವೆ ಕಥೆ ನೂರನು
ನಾನಿಂದು ನಗಿಸುವೆ ಈ ನಿನ್ನನು
ಇರುಳಲ್ಲು ಕಾಣುವೆ ಕಿರು ನಗೆಯನು
ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು
ಜೊತೆಯಾಗಿ ನಡೆವೆ ನಾ ಮಳೆಯಲೂ
ಬಿಡದಂತೆ ಹಿಡಿವೆ ಈ ಕೈಯ್ಯನು
ಗೆಳೆಯ ಜೊತೆಗೆ ಹಾರಿ ಬರುವೆ
ಬಾನ ಎಲ್ಲೆ ದಾಟಿ ನಲಿವೆ
ನಗುವ ನಯನ ಮಧುರ ಮೌನ
ಮಿಡಿವಾ ಹೃದಯ ಇರೆ ಮಾತೇಕೆ
ಈ ರಾತ್ರಿ ಹಾಡೋ ಪಿಸುಮಾತಲಿ
ನಾ ಕಂಡೆ ಇನಿದಾದ ಸವಿ ರಾಗವ
ನೀನಲ್ಲಿ ನಾನಿಲ್ಲಿ ಏಕಾಂತದಿ
ನಾ ಕಂಡೆ ನನ್ನದೇ ಹೊಸ ಲೋಕವ
ಈ ಸ್ನೇಹ ತಂದಿದೆ ಎದೆಯಲ್ಲಿ
ಎಂದೆಂದೂ ಅಳಿಸದ ರಂಗೋಲಿ
ಆಸೆ ಹೂವ ಹಾಸಿ ಕಾದೆ
ನಡೆ ನೀ ಕನಸಾ ಹೊಸಕಿ ಬಿಡದೆ.
ನಗುವ ನಯನ ಮಧುರ ಮೌನ
ಮಿಡಿವಾ ಹೃದಯ ಇರೆ ಮಾತೇಕೆ
ಹೊಸ ಭಾಷೆಯಿದು ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ
ಪ್ರೇಮದ ಅದೆಷ್ಟು ಉತ್ಕಟ ಭಾವಗಳು!
ReplyDeleteஎன்னை வசீகரிக்கும் பாடல்
ReplyDeleteಇದೊಂದು ಹಾಡು ಸಾಕು ಎಲ್ಲಾ ಪ್ರೇಮಿಗಳಿಗೆ 💞
ReplyDeleteSuper song
ReplyDeleteಎವರ್ಗ್ರೀನ್ ಸಾಂಗ್ 😍
ReplyDeleteWonderful 👍
ReplyDeleteರಾಜ ಸರ್ ರವರ ಸಂಗೀತದಲ್ಲಿ R N ಜಯಗೋಪಾಲ್ ರವರ ಅದ್ಭುತ ಸಾಹಿತ್ಯದಲ್ಲಿ ಮೂಡಿ ಬಂದ ಅತ್ಯದ್ಭುತ ಗೀತೆ..👍🏽☺️✍🏽💛❤️
ReplyDelete🌹🥀🌺
ReplyDeleteNice for us
ReplyDelete